#ದುಡಿ-ಗಳಿಸು-ಉಳಿಸು-ಕೊಳ್ಳು.
ದಿನವಿಡೀ ದುಡಿದು
ದೇಹದ ಶ್ರಮ ಶಕ್ತಿಯನ್ನೆಲ್ಲಾ ಹಿಂಡಿ!
ಬಸಿದು ಬೆಂಡಾದ ಜನ,
'ಗಳಿಸಿದ್ದೆಷ್ಟು ಉಳಿಸಿದ್ದೆಷ್ಟು!'
ಯಾರ ಕಣ್ಙಲ್ಲೂ, ಕನಸಿಲ್ಲ.
ಯಾರ ಮೈಯಲ್ಲೂ, ಕಸುವಿಲ್ಲ.
ಯಾರ ಕೈಯಲ್ಲೂ, ಕಾಸಿಲ್ಲ.
ಹೊಟ್ಟೆಗೆ, ಬಟ್ಟೆಗೆ, ಮಕ್ಕಳ ಓದಿಗೆ,
ಮದುವೆಗೆ, ಆಗಿ ಉಳಿದರೆ!
ಚಿಕ್ಕದೊಂದು ಸ್ವಂತ ಸೂರಿಗೆ.
ನೂರೆಂಟು ಕನಸುಗಳ ಬೆನ್ನು ಹತ್ತಿ,
ಮಾರ್ಕೆಟ್ ಸೃಷ್ಟಿಸಿದ!
'ಸುಖ' ಎನ್ನುವ ಭ್ರಮೆಯ ಹಿಂದೆ,
ಕೃಷಿ, ಕಾರ್ಖಾನೆ, ಕಛೇರಿಯಲ್ಲಿ,
'ದುಡಿ-ಗಳಿಸು-ಉಳಿಸು-ಕೊಳ್ಳು'
ಎನ್ನುವ ಸ್ಪರ್ಧೆಯ ವರ್ತುಲ!
ಕೊನೆಗೆ!
ಹಲವರಿಗುಳಿದಿದ್ದು, ಸಾಲ!
ಕೆಲವರಿಗದುವೇ, ಲಾಭ!